Tuesday, September 30, 2008

ಹೋಗುವುದಿದ್ದರೆ ಬೇಗ ತೊಲಗಿ ಪೀಡೆಗಳೆ



ಇವುಗಳನ್ನು ಪೀಡೆಗಳೆನ್ನದೆ ಬೇರೆ ದಾರಿಯಿಲ್ಲ. ಇವು ಬೆಂಗಳೂರಿಗೆ ಅಂಟಿಕೊಂಡ ವಾಸಿಯಾಗದ ಖಾಯಿಲೆಗಳು. ದೇಶಭಕ್ತರ ವರಸೆಯಲ್ಲಿ ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೇಲಿ ಮಾಡುವ ಇವುಗಳ ಮೈಮನಸ್ಸು ತುಂಬಾ ವಿಕೃತಿಯೇ. ಬದುಕಿನ ಅನಿವಾರ್ಯತೆಗಾಗಿ ಬೆಂಗಳೂರಿಗೆ ಬಂದು ಕುಳಿತ ಈ ವಲಸಿಗರ ದುರಹಂಕಾರ ಮಿತಿಮೀರುತ್ತಿರುವ ಹಾಗಿದೆ.

ಒಂದು ಪೀಡೆ ಹೀಗೆನ್ನುತ್ತದೆ: Pathetic Infrastructure .. Most stupid road and footpath design .. Goon autowallas, highest fuel prices, highest road tax, almost zero business and service sense, No proper town planning, Farthest Airport .. and guys!! u know you will not find all these in any of the major Indian cities like Hyderabad, Chennai, Kochi, Noida, Gurgaon, Chandigarh, Jaipur, Ahemdabad, Delhi, Lucknow, Mumbai and Pune !!”

ಮತ್ತೊಂದು ಪೀಡೆ ಹೀಗೆನ್ನುತ್ತದೆ:“Yes ! I tool WILL LEAVE Bangalore ! I’ve been here for almost an year and Except my Job I cannot recall single thing in this city that I can relate myself too. As for some practical reasons, friends above have already posted dozens valid points (so avoiding duplicity). Just Adding my 1 thought: Bangalore, for you to become a true cosmopolitan city, first you need to open yourself to India and Indians. If you will continue paint your Busses, Route-maps, Area Layout maps in “Kannada” how will everyone understand and accept you ?”

ಇನ್ನೊಂದು ಪೀಡೆ ಹೀಗೆನ್ನುತ್ತದೆ: Yes...me also leaving soon. This the most over hyped city in India. The city with worst infrastructure should not be the IT hub of India. People are very rude and egoistic here. And auto driver behaves like a “Millionaire” here and we really need to beg them to board an auto. I am staying in so called posh area and we suffer power cut at least 2-3 hrs a day. Walking on the road at 9 pm is like a 2 am in Mumbai. I have read that some good for nothing kannadiga people said that outsider made bangalore worst. But they does not know that if outsider start leaving bangalore then kannadiga people has come one streets with their families begging for alms and this IT hub become “BAGGER HUB” of India. I am sure that sooner or later this IT hub should be shifted to a better place and it will.”

ಮಗದೊಂದು ಪೀಡೆ ಹೀಗೆನ್ನುತ್ತದೆ: “I want to leave Bangalore as soon as possible. Need the reasons;here they are - 1. There is so much hype about the city; people living in other cities consider it a heaven... but you know the reality when you live here. Bangalore sets false expectations...let the world know its reality. 2.The roads are pathetic...too bad to be called roads. 3.Public transport, so called auto and buses they govern the city. Running without meter and talking nonsense... 4.Kannada language,which people love to speak thinking as if it is India’s national language. 5.The city sleeps at 10 and the dogs wake... The reasons are uncountable; conclusion is just one; Bangalore is not a place to live in...”


ಇಂಥ ದುರಹಂಕಾರಿ, ದಾರ್ಷ್ಟ್ಯದ ಬರೆಹಗಳೆಲ್ಲಾ ದಾಖಲಾಗಿರುವುದು http://www.leavingbangalore.com/ ಎಂಬ ವೆಬ್‌ಸೈಟ್‌ನಲ್ಲಿ. ಈ ವೈಬ್‌ಸೈಟ್‌ಗೆ ಸದ್ಯಕ್ಕೆ ಅಪ್ಪ ಅಮ್ಮ ಯಾರೂ ಇಲ್ಲ.

ನಿನ್ನೆ ಮೆಜೆಸ್ಟಿಕ್ ಬಳಿ ಬರುತ್ತಿದ್ದಾಗ ದೊಡ್ಡ ಗಾತ್ರದ ವಿನೈಲ್ ಫಲಕವೊಂದನ್ನು ನೋಡಿದೆ. ಅದರಲ್ಲಿ ಒಬ್ಬ ಹೆಂಗಸು ತನ್ನ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಿರುವ ಚಿತ್ರವೊಂದನ್ನು ಮುದ್ರಿಸಲಾಗಿದೆ. ಕೆಳಗೆ ಈ ವೆಬ್‌ಸೈಟ್‌ನ ವಿಳಾಸ. ಈ ಫಲಕ ನೋಡಿದ ಕೂಡಲೇ ಬೆಂಗಳೂರನ್ನು ತಮ್ಮ ವೇಶ್ಯಾಗೃಹ ಮಾಡಿಕೊಳ್ಳಲು ಯತ್ನಿಸುತ್ತಿರುವ ಕೆಲ ಕಾರ್ಪರೇಟ್ ಸಂಸ್ಥೆಗಳ ಕುಮ್ಮಕ್ಕೇ ಕಣ್ಣಿಗೆ ರಾಚಿತು.

ಈ ವೆಬ್‌ಸೈಟ್‌ನ ಜಾಹೀರಾತು ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದೆಯಂತೆ. ಕುತೂಹಲದಿಂದ ಈ ವೆಬ್‌ಸೈಟ್ ತೆರೆದುನೋಡಿದೆ. ‘ಯಾಕೆ ನೀವು ಬೆಂಗಳೂರು ತೊರೆಯಲು ನಿರ್ಧರಿಸಿದ್ದೀರಿ? ಇಲ್ಲಿನ ರಸ್ತೆಗಳಿಂದಲೇ? ಇಲ್ಲಿನ ಟ್ರಾಫಿಕ್ ಸಮಸ್ಯೆಯಿಂದಲೇ? ಇಲ್ಲಿನ ಜನರಿಂದಲೇ? ಏನಾಗುತ್ತಿದೆ ಇಲ್ಲಿ? ಎಂಬ ಪ್ರಶ್ನೆಗಳನ್ನು ಇಟ್ಟು ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ನೂರಾರು ಜನರ ಪ್ರತಿಕ್ರಿಯೆಯ ಹೊರತಾಗಿ ಇಲ್ಲಿ ಮಿಕ್ಕ ಏನೂ ಇಲ್ಲ. ಇದನ್ನು ಸೃಷ್ಟಿಸಿದ ಮುಖೇಡಿಯ ಹೆಸರು, ವಿಳಾಸವೂ ಇಲ್ಲ.

ಈ ಸೈಟ್ ಯಾಕೆ ಹುಟ್ಟಿಕೊಂಡಿದೆ, ಇದನ್ನು ಸೃಷ್ಟಿಸಿದವರ್‍ಯಾರು ಎಂಬುದರ ಬಗ್ಗೆ ಹೆಚ್ಚು ಚರ್ಚಿಸಬೇಕಾಗಿಲ್ಲವೆನಿಸುತ್ತದೆ. ಒಂದು ವೇಳೆ ಬೆಂಗಳೂರಿಗೆ ವಲಸೆ ಬಂದಿರುವವರು ಇಲ್ಲಿಂದ ಹೊರಟು ಹೋದರೆ ಕನ್ನಡಿಗರು ತಮ್ಮ ಹೆಂಡಿರು ಮಕ್ಕಳೊಂದಿಗೆ ಭಿಕ್ಷೆ ಬೇಡಬೇಕಾಗುತ್ತದೆ ಎಂಬ ಮಾತಿನಿಂದ ಹಿಡಿದು ಇಲ್ಲಿನ ಬಿಎಂಟಿಸಿ, ಆಟೋ ರಿಕ್ಷಾ ಡ್ರೈವರ್‌ಗಳನ್ನು ಗೂಂಡಾಗಳು ಎನ್ನುವವರೆಗೆ ಇಲ್ಲಿ ಬಗೆಬಗೆಯ ಅಭಿಪ್ರಾಯಗಳು ಹರಡಿಕೊಂಡಿವೆ. . ಕನ್ನಡಿಗರು ಕನ್ನಡವನ್ನೇ ರಾಷ್ಟ್ರೀಯ ಭಾಷೆ ಎಂದು ಭಾವಿಸಿದ್ದಾರೆ ಎಂದು ಮೂರ್ಖನೊಬ್ಬ ಪ್ರತಿಕ್ರಿಯಿಸಿದ್ದಾನೆ. ಬಹುಶಃ ಈ ಸೈಟ್ ಸೃಷ್ಟಿಸಿದವನ ಉದ್ದೇಶವೂ ಇದೇ ಆಗಿತ್ತು ಎಂದು ಊಹಿಸಬಹುದು. ಕನ್ನಡಿಗರನ್ನು ತೆಗಳುವುದು, ಅಪಮಾನಿಸುವುದೇ ಈ ವೆಬ್‌ಸೈಟ್‌ನ ಮೂಲೋದ್ದೇಶ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಹೀಗೆ ಅಂತರ್ಜಾಲದಲ್ಲಿ ಕನ್ನಡಿಗರನ್ನು, ಕರ್ನಾಟಕವನ್ನು ಇಲ್ಲಿ ಬಂದು ಬದುಕುತ್ತಿರುವವರೇ ತೆಗಳುವ, ಗೇಲಿ ಮಾಡುವ ಕಾಯಕ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಮ್ಮ ಊರು-ಕೇರಿ ಬಿಟ್ಟು ಬದುಕು ಸಾಗಿಸಲು ಬೆಂಗಳೂರಿಗೆ ಬಂದು ಬಿದ್ದವರು ಕನಿಷ್ಠ ಇಲ್ಲಿನ ನೆಲ-ಸಂಸ್ಕೃತಿ-ಭಾಷೆಯ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಇಲ್ಲಿನ ಜನ ಬಯಸುವುದು ಸಹಜ. ಆದರೆ ಈ ದುರಹಂಕಾರಿಗಳು ಕನ್ನಡಿಗರನ್ನು ನಿಂದಿಸುವ ಕಾಯಕವನ್ನು ಜಾರಿಯಲ್ಲೇ ಇಟ್ಟುಕೊಂಡಿದ್ದಾರೆ.

ಈ ರೀತಿಯ ಕನ್ನಡ ವಿರೋಧಿ ಚಟುವಟಿಕೆಗಳು ಒಂದಲ್ಲ ಒಂದು ಬಗೆಯಲ್ಲಿ ನಡೆಯುತ್ತಲೇ ಇದೆ. ಕೆಲವು ಹೊರಜಗತ್ತಿಗೆ ಗೊತ್ತಾಗುತ್ತದೆ, ಮತ್ತೆ ಕೆಲವು ಒಳಗಿಂದೊಳಗೇ ನಡೆಯುತ್ತವೆ.

ಈಗ ಈ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಮಾಫಿಯಾ ಗುಂಪು ರಾಜಾರೋಷವಾಗಿ ಬೀದಿಪ್ರಚಾರಕ್ಕೆ ಇಳಿದ ಹಾಗೆ ಕಾಣುತ್ತದೆ. ಇಲ್ಲವಾದಲ್ಲಿ ಬೆಂಗಳೂರಿನ ಹೃದಯದಲ್ಲೇ ಇಂಥ ಜಾಹೀರಾತು ಪ್ರಕಟಿಸುವ ಧೈರ್ಯವನ್ನು ಇವರು ಮಾಡುತ್ತಿರಲಿಲ್ಲ.

ಒಂದು ವೇಳೆ ಈ ಮುಖೇಡಿಗಳಿಗೆ ಬೆಂಗಳೂರಿನಲ್ಲಿ ವಾಸ ಮಾಡುವುದು ಕಷ್ಟವೆನಿಸಿದರೆ ಅವರನ್ನು ಇಲ್ಲೇ ಇರಿ ಎಂದು ಮುದ್ದು ಮಾಡಿದವರು ಯಾರು. ಇವರನ್ನು ಕರೆದುಕೊಂಡು ಬಂದವರಾದರೂ ಯಾರು? ಬೆಂಗಳೂರಿನ ಹವಾಮಾನ, ಇಲ್ಲಿನ ಜನರ ಹೃದಯವೈಶಾಲ್ಯ, ಉದ್ಯೋಗದ ಅವಕಾಶಗಳಿಂದಲ್ಲವೇ ಈ ಪೀಡೆಗಳು ಬಂದು ಇಲ್ಲಿಗೆ ಒಕ್ಕರಿಸಿದ್ದು? ಇಲ್ಲಿ ವ್ಯವಸ್ಥೆ ಸರಿಯಿಲ್ಲವೆಂದರೆ ಅವರು ಇಲ್ಲಿ ಇರುವ ಅವಶ್ಯಕತೆಯೂ ಇಲ್ಲ.
ಬೆಂಗಳೂರು ಈ ಪೀಡೆಗಳು ಬರುವ ಮುನ್ನವೇ ಹೆಚ್ಚು ಸುಖ ಸಮೃದ್ಧಿಯಾಗಿತ್ತು. ಈ ಜನರು ಬಂದ ಮೇಲೆಯೇ ಇಲ್ಲಿ ಬಡವರ, ಮಧ್ಯಮವರ್ಗದವರ ಬದುಕು ದುಸ್ತರವಾಗಿದ್ದು, ಬೆಲೆಗಳು ಗಗನಕ್ಕೇರಿದ್ದು, ಕೊಳ್ಳುಬಾಕ ಸಂಸ್ಕೃತಿಗೆ ಸಮಾಜ ದಿಕ್ಕುಗೆಟ್ಟಿದ್ದು. ಈ ಪೀಡೆಗಳಿಂದಲೇ ಬೆಂಗಳೂರಿನಲ್ಲಿ ಸೈಟುಗಳ ಬೆಲೆ ಗಗನಕ್ಕೇರಿದ್ದು, ಮನೆಬಾಡಿಗೆ ಕೈಗೆ ಎಟುಕದಂತಾಗಿದ್ದು.

ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೋದರೆ ಭಿಕ್ಷುಕರಾಗುವವರು ನಾವು ಕನ್ನಡಿಗರಲ್ಲ, ಈ ಮುಖೇಡಿಗಳೇ! ಬೆಂಗಳೂರು ನೆಮ್ಮದಿಯಾಗಿ ಉಸಿರಾಡುತ್ತದೆ.

ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೊರಡುವ ಮನಸ್ಸು ಮಾಡಿದ್ದರೆ ಯಾಕಿನ್ನೂ ಯಾರೂ ಹೋಗುತ್ತಿಲ್ಲ? ಸುಮ್ಮನೆ ಹೊರಟು ಹೋಗುವ ಬದಲು ನಾವು ಬೆಂಗಳೂರು ಬಿಟ್ಟುಹೋಗುತ್ತಿದ್ದೇವೆ ಎಂದು ಯಾರನ್ನೋ ಬೆದರಿಸುವ ತಂತ್ರವೇಕೆ? ಹಾಗೆ ಬೆದರುವವರಾದರೂ ಯಾರು? ಇಂಥ ಕೊಳಕು ಬುದ್ಧಿಯವರು ಇಲ್ಲಿಂದ ತೊಲಗಲು ಲಾಯಕ್ಕಾದವರೇ ಸರಿ. ಹೀಗಾಗಿ ಈ ಬಗೆಯ ವೆಬ್ ಸೈಟ್ ಮಾಡಿಕೊಂಡು ಕರ್ನಾಟಕ, ಬೆಂಗಳೂರಿನ ವಿರುದ್ಧ ಅಪಪ್ರಚಾರ, ಗೇಲಿ ಮಾಡುವವರು ಆದಷ್ಟು ಬೇಗ ತೊಲಗಿಹೋಗಲಿ.

ಇದೇ ವೆಬ್‌ಸೈಟ್‌ನಲ್ಲಿ ಹಲವರು ಈ ದುರಹಂಕಾರಿಗಳ ಸೊಕ್ಕನ್ನು ಅಡಗಿಸುವ ಮಾತನ್ನೂ ದಾಖಲಿಸಿದ್ದಾರೆ. ಅದರಲ್ಲಿ ಒಂದು ಬರೆಹ ಹೀಗಿದೆ: Hello ppl.. I love Bangalore for what it is.. I am not a Kannadiga and I'm in Bangalore for 4 years now and i do have many reasons to say that I love this city. Bangalore is the place where many ppl realize their dreams.. First job, first salary, frenz at office.. and the list goes on... What if u have traffic? What if the city is expensive? Please stop complaining about the city. It's really a cool place to stay. However the city now is, it's because of us who stay here. People come here from all over India to earn a livelihood & after getting everything from this place, they say the city is sick. For those ppl I would rather say "it's U & Ur thots that are sick and not the city". Tell me one good city in India, for that matter in the world, that doesn't have any problems.. Finally i have a message for all those who want to leave Bangalore for what so ever reason they have... Please leave and make it a better place for ppl like us who love this place..
ಚಿತ್ರಗಳು: ಶರಣ್

35 comments:

Anonymous said...

leavingbanagalore timesofindiaದವರು ಆಡುತ್ತಿರುವ ಭರ್ಜರಿ ನಾಟಕ. ಕಾರ್ಪರೇಟ್ ಸಂಸ್ಥೆಗಳ ಬೂಟು ನೆಕ್ಕುವ, ಎಂಜಲು ತಿನ್ನುವ ಜನರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಸಂಚು ಹೂಡಿ ಬಹಳ ದಿನಗಳಾದವು. ಬೆಂಗಳೂರನ್ನು ಕನ್ನಡಿಗರಿಂದ, ಕರ್ನಾಟಕದಿಂದ ಹೊರಗೆ ತಂದು ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳಲು ಕೆಲವರು ಹವಣಿಸುತ್ತಿದ್ದಾರೆ. ಇವರನ್ನು ಈಗಲೇ ನಿಯಂತ್ರಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. leavingbanagalore ಒಂದು ಭಾರೀ ಷಡ್ಯಂತ್ರ. ಇವರನ್ನು ಇಲ್ಲಿಂದ ಒದ್ದೋಡಿಸಬೇಕಾದ ಕಾಲ ಹತ್ತಿರ ಬಂದಿದೆ.
ರಾಜು ಬೆಟ್ಟದೂರು

Anonymous said...

'Leaving Bangalore' ಹೋರ್ಡಿಂಗನ್ನು ನಾನೂ ಇವತ್ತು (ಸೆ.30) ಕ್ವೀನ್ಸ್ ರಸ್ತೆಯಲ್ಲಿ ನೋಡಿದೆ. ಆ ವೆಬ್ ಸೈಟ್ ವಿಳಾಸ ನೋಡಿ, ಅದರಲ್ಲಿ ಏನಿದೆ ಎಂದು ಹುಡುಕೋಣ ಎಂದು ಕಚೇರಿಗೆ ಬಂದೆ.ಅದಕ್ಕೆ ಲಾಗಿನ್ ಆಗುವ ಮುನ್ನ ನಿಮ್ಮ ಬ್ಲಾಗ್ ನೋಡಿದೆ. ಅಷ್ಟರಲ್ಲಿ ನೀವಾಗಲೇ ಜಾಡಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಈ ರೀತಿ ಬೋರ್ಡ್ ಹಾಕಿ ಕರ್ನಾಟಕವನ್ನು ಅವಮಾನಿಸುತ್ತಿರುವವರು ಬೆಂಗಳೂರಲ್ಲಿ ಇರಲು ಲಾಯಕ್ಕಿಲ್ಲ. ಅಂದ ಹಾಗೆ ಇವರನ್ನು ಯಾರೂ ಬೆಂಗಳೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟಿರಲಿಲ್ಲ. ಕೆಲಸದಾಸೆಗೆ ಬೆಂಗಳೂರಿಗೆ ಬಂದು, ಹಣ ಮಾಡಿಕೊಂಡು ಈ ಸೊಕ್ಕಿನ ಮಾತನಾಡುವವರು ಹೋದರೇ ಬೆಂಗಳೂರಿಗೆ ಒಳ್ಳೆಯದು. ಈ ರೀತಿ ವೆಬ್ ಸೈಟ್ ಮಾಡಿಕೊಂಡಿರುವವರು ದುಡ್ಡಿನ ಮದದಿಂದ ಕೊಬ್ಬಿರುವ ಐಟಿ ಮಂದಿಯಲ್ಲದೆ ಮತ್ಯಾರೂ ಅಲ್ಲ.
-ಲಕ್ಷ್ಮೀಕಾಂತ್,
ಮಂಡ್ಯ.

sugandhi said...

ನವಸಾಮ್ರಾಜ್ಯಶಾಹಿಗಳು ಇಂದು ಐಟಿ-ಬಿಟಿ ಮುಖದಲ್ಲಿ ಉದ್ಭವಿಸಿದ್ದಾರೆ. ಇವರನ್ನು ನಿಗ್ರಹಿಸಬೇಕಾದವರೇ ಇವರನ್ನು ಪೋಷಿಸುತ್ತಿದ್ದಾರೆ.
leavingbanagalore ಅಭಿಯಾನ ಇವರ ಒಳಸಂಚಿನ ಒಂದು ಪ್ರಯೋಗವಷ್ಟೆ. ಇಂಥ ಹಿಡನ್ ಅಜೆಂಡಾಗಳು ಇವರ ಬಳಿ ಎಷ್ಟಿವೆಯೋ ಏನೋ ಗೊತ್ತಿಲ್ಲ. ಕನ್ನಡದ ಪತ್ರಿಕೆಗಳನ್ನು ಕೊಂಡ ಮಾತ್ರಕ್ಕೆ ಟೈಮ್ಸ್ ಗುಂಪಿನವರು ಕನ್ನಡಿಗರನ್ನು, ಕರ್ನಾಟಕವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ

Anonymous said...

ಇವತ್ತು ಬೆಳಗ್ಗೆ ಎಫ್ ಎಮ್ ಕೇಳುವಾಗ ಎರೆಡೆರಡು ನಿಮಿಷಕ್ಕೆ ಈ Leaving Bangalore jEhIrAtu ಹಾಕ್ತಿದ್ದರು. ಕೇಳಿ ಮೈ ಉರಿದು ಹೋಗಿತ್ತು. leaving Bangalore ಅಂತ ಪೋಸು ಕೊಡುವವರನ್ನು kick out ಮಾಡಬೇಕಾದ ಕಾಲ ಹತ್ತಿರ ಬಂದಿದೆ. ಇಲ್ಲದಿದ್ದರೆ ಕನ್ನಡಿಗರಿಗೆ ಖಂಡಿತ ಉಳಿಗಾಲವಿಲ್ಲ. ನೀವು ಅವರನ್ನೆಲ್ಲ ‘ಪೀಡೆಗಳು’ ಅಂತ ಕರೆದು ಬರೆದಿರೋದು ಚೆನ್ನಾಗಿದೆ.

ಚೇತನಾ

ದಿನೇಶ್ ಕುಮಾರ್ ಎಸ್.ಸಿ. said...

leavingbanagalore ಕುರಿತಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರು ನೀಡಿರುವ ಪತ್ರಿಕಾ ಹೇಳಿಕೆ ಹೀಗಿದೆ:

ಕನ್ನಡಿಗರನ್ನು ಅವಹೇಳನ ಮಾಡಲೆಂದೇ ಕೆಲವು ದುಷ್ಕರ್ಮಿಗಳು ಆರಂಭಿಸಿರುವ ಲೀವ್ ಬೆಂಗಳೂರು ಅಭಿಯಾನವನ್ನು ಸರ್ಕಾರ ಕೂಡಲೇ ತಡೆದು, ಇದರ ಹಿಂದಿನ ವ್ಯಕ್ತಿಗಳನ್ನು ಬಂಧಿಸಬೇಕು.

ಲೀವ್ ಬೆಂಗಳೂರು ಅಭಿಯಾನದ ಮೂಲಕ ಕನ್ನಡಿರನ್ನು ಭಿಕ್ಷುಕರು, ಗೂಂಡಾಗಳು ಎಂದು ಚಿತ್ರಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಶಾಂತಿ ಕದಡುವ ಯತ್ನ. ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಲು ಕೆಲ ವಲಸೆಕೋರರು ಯತ್ನಿಸುತ್ತಿದ್ದಾರೆ. ಸರ್ಕಾರವೇ ಇವರನ್ನು ಹದ್ದುಬಸ್ತಿನಲ್ಲಿ ಇಡಬೇಕು, ಇಲ್ಲವಾದಲ್ಲಿ ಕರವೇ ಕಾರ್ಯಕರ್ತರೇ ಈ ಕೆಲಸ ಮಾಡಬೇಕಾಗುತ್ತದೆ.

ಲೀವ್ ಬೆಂಗಳೂರು ಎಂಬ ಜಾಹೀರಾತುಗಳನ್ನು ಬೆಂಗಳೂರು ನಗರದ ಹಲವೆಡೆ ಬೃಹತ್ತಾಗಿ ಪ್ರದರ್ಶಿಸಲಾಗುತ್ತಿದೆ. ಯಾರಿಗೆ ಬೆಂಗಳೂರು ಸರಿಯಿಲ್ಲವೆನಿಸುತ್ತದೋ ಅವರು ಮೊದಲು ಇಲ್ಲಿಂದ ಹೊರಟು ಹೋಗಲಿ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಈ ನೆಪದಲ್ಲಿ ಕನ್ನಡಿರನ್ನು ಅವಹೇಳನ ಮಾಡುವುದನ್ನು ಸಹಿಸುವುದು ಸಾಧ್ಯವಿಲ್ಲ.

ಬೆಂಗಳೂರಿಗೆ ಬದುಕಲು ಬಂದಿರುವವರು ಇಲ್ಲಿನ ಭಾಷೆ, ಜನ ಹಾಗು ಸಂಸ್ಕೃತಿಯನ್ನು ಗೌರವಿಸುವುದನ್ನು ಮೊದಲು ಕಲಿತುಕೊಳ್ಳಬೇಕು. ಅದನ್ನು ಬಿಟ್ಟು ಕನ್ನಡಿಗರನ್ನೇ ದೂಷಿಸಲು ತೊಡಗಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ.

ವಲಸಿಗರು ಬೆಂಗಳೂರಿಗೆ ಬರುವ ಮುನ್ನವೂ ಈ ನಗರ ಸಮೃದ್ಧವಾಗಿತ್ತು. ಈಗಿನ ಪರಿಸರ ಮಾಲಿನ್ಯ, ಟ್ರಾಫಿಕ್ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ ಇರಲಿಲ್ಲ. ಇವರು ಬಂದ ಪರಿಣಾಮವಾಗಿಯೇ ನಗರದಲ್ಲಿ ಸಮಸ್ಯೆಗಳು ಉದ್ಭವಿಸಿವೆ. ಹೀಗಾಗಿ ಈ ವಲಸಿಗರು ಬೆಂಗಳೂರು ಬಿಟ್ಟು ಹೋದರೆ ಬೆಂಗಳೂರಿನ ಜನ ನೆಮ್ಮದಿಯಿಂದ ಬದುಕುತ್ತಾರೆ.

ಸರ್ಕಾರ ಕೂಡಲೇ ಲೀವ್ ಬೆಂಗಳೂರು ವೆಬ್ ಸೈಟನ್ನು ನಿಷೇಧಿಸಬೇಕು. ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಬರೆದಿರುವ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಬೇಕು. ಈ ಅಭಿಯಾನದ ಸಂಬಂಧ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಕೂಡಲೇ ಕಿತ್ತು ಹಾಕಬೇಕು, ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.

Anonymous said...

thank you friend.....
saavira sangatane maduva kelasa nimma lekana madide.e nela, bashe, samskruthi bele arthavagada intha manstitiyavarige tholagi peedegale andre artha agalla.natte basheli helodadre hale ekda tagandu hodibeku.

j.k said...

helo,
leavingbanagalore timesofindia karma khanda bayaligeleda thamge danyavadagalu.
namma asthitvavanne prashnisuva mandige nimma artical sooktha uttara.
-jaanu p.b.

Unknown said...

ಇಂಥಹದ್ದೊಂದು ವೆಬ್ಸೈಟೆ ಮಾಡಿ ಅದನ್ನು ನಮ್ಮ ಊರಿನಲ್ಲೇ ಕಟ್ ಔಟ್ ಮಾಡಿ ನಿಲ್ಲಿಸುವಷ್ಟು ಮುಂದುವರಿದಿದ್ದರೆ ಅಂದರೆ ಇವರಿಗೆ ಎಂಥಹ ಸೊಕ್ಕು ಇರಬೇಡ. ಕನ್ನಡಿಗರೆಲ್ಲ ಮಣ್ಣು ತಿಂತಾ ಕೂತಿದರ. ಅದನ್ನು ಸುಟ್ಟು ಹಕೋದಲ್ವ?
ಅದರಲ್ಲಿ ಸಕಾರಾತ್ಮಕವಾಗಿ ತಮಗಿರುವ ತೊಂದರೆಗಳನ್ನೋ ಬೆಂಗಳೂರಿನ ಸಮಸ್ಯೆಗಳನ್ನು ಹೇಗೆ ಸರಿ ಪಡಿಸುವುದು ಇಂತಹ ಚರ್ಚೆ ನಡೆಸಿದ್ದರೆ ಒಪ್ಪಬಹುದಿತ್ತು. ಬೆಂಗಳೂರಿನ ಅನ್ನ ತಿಂದು ಹಿಂಗೆ ಮಾತಾಡುವುದು ಸರಿ ಇಲ್ಲ. ನಿಮ್ಮ ಬರಹ ಸೊಗಸಾಗಿದೆ

Anonymous said...

higanno bolimakklu..adya indrapuri inda dumkidaaro gottilla..
iurella baro munche bengluru eshtu tannagittu anta ee mundevukk en gottu..

Anonymous said...

Oddu odisi namma bangalore anna baiyyo janana.. e nanna maklige Mumbai alli agtiro galate taraha madidre artha aagutte anisutte.. Illey iddu illey uddhara aagi illi janana, jaagana yella tegalta irtare kachda jana tandu...

Anonymous said...

T A Narayanagowda avara helike eesanjeyalli prakatavagide. illi nodi: http://www.eesanje.com/bangalore.html

ramesh pujari

Anonymous said...

leavingbanagalore timesofindia kuritu karave narayanagowdara helike sariyagide.website nishedakke ella knnadapara sangatanegalu oggattina howrata nedasabekada anivaryate srustiyagide.
ittechina dingalalli nadu,nudi,nelada vicharadalli kalajiyinda pratibatisuva karave howrata kaigettikowndare ondastu parinama beeralide.
-Shambu

Anonymous said...

ದೀನೆಶ ರವರೆ,
ಮೊದಲು ದನ್ನ್ಯವಾದಗಲು,

ಇತ್ತಿಚಿಗೆ, ಹೊರಗಿನಿಂದ ಬಂದಂತ ಮುಶಂಡಿಗಳು
ಕರ್ನಾಟಕದ, ಏಳಿಗೆಯನ್ನ ಸಹಿಸಲಾಗದೆ,
ಈ ತರಹದ ಪಿತುರಿಗಳನ್ನಾ ಮಾಡ್ತ ಓಡಾಡ್ತಾ ಇರೊದು
ಅವುಗಳನ್ನಾ ದೊಡ್ದದಾಗಿ ಜಾಹಿರಾತುಗಳನ್ನಾ ಮಾಡಿ,
ತಾಳ್ಮೆ, ಬ್ರಾತ್ರುತ್ವ, ಸಹಬಾಳ್ವೆಗೆ ಹೆಸರಾಗಿರುವ ಕನ್ನಡಿಗರ
ಸಂಯಮವನ್ನ ಕದಡುವ ಪ್ರಯತ್ನವನ್ನಾ ಮಾಡ್ತಾ ಇದ್ದಾರೆ.

ಕನ್ನಡಿಗರ ಬಗ್ಗೆ ಗೊತ್ತಿರುವ ಯಾರೊಬ್ಬನು ಇಂತಾ ದುಸ್ಸಾಹಾಸಕ್ಕೆ ಕೈ ಹಾಕೊದಿಲ್ಲಾ,

ಕನ್ನಡಿಗರಿಗೆ ಕೊಡಿ ಬಾಳೊದು ಗೊತ್ತು, ತಲೆ ಕೆಟ್ಟರೆ, ಕುತ್ತಿಗೆ ಪಟ್ಟಿ ಹಿಡಿದು,
ಕರ್ನಾಟಕದಿಂದ ಹೊರಗಟ್ಟೊದು ಗೊತ್ತು.

-ಜೋಶಿ

Anonymous said...

hello,

its time people who do not like bangalore, pack and get out of karnataka itself. when there are millions of people here and they all screw up the place, the real problem tends to show up as increase in prices of all essentials, housing, and general rude behaviour and rich poor divide.

your article is nice and brings some serious issues to the limelight. such websites must be banned.

keep up the good work of writing about the city!!

i wish i can get those good old charming days of bengaluru, when i was young and played with my friends. i think my children can never see such days again.

good luck.

Srikanth

ಕುಕೂಊ.. said...

ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ,

ತೊಲಗಿ ಎಂದೇಳುವುದಲ್ಲ ತೊಲಗಿಸಲು ಮುಂದಾಲೇ ಬೇಕು. ಇಲ್ಲದಿದ್ದರೆ ನಮ್ಮ ನೆಲದ ಬದುಕನ್ನು ಕುಲಗೆಡಿಸಿ ಹಾಕದೇ ಇರಲಾರರು ಈ ತಿಳಿಗೇಡಿಗಳ ಹಿಂಡು.

ಕುಮಾರಸ್ವಾಮಿ. ಕಡಾಕೊಳ್ಳ
ಪುಣೆ

Anonymous said...

Its great re,
Ur view is absolutely wonderful, just publish one statement that they all are eating rice and owning a home in b,lore
and tell those northis(North indians) to leave in b,lore or fuck off.--
Alla tamil nadu nalli tikka muchkondu irthare alwa, adre namma urinalli bandu nodi yestu dimmagu, b,lore ge bhikarigallu thraha
bandu nammele roof hakthare.

Obba kannadiga!

Anonymous said...

ishtella mathanaduva peedegale, nivu inna bengaloorinalle iddira..muchhikondu nimage yellige beko allige tolagi..nimmana navenu magalarathi madi baramadikondialla..athva nivu hogutheera endu ille yaru kanniru idolla..nivalla enu us, uk antha deshadidhna bandavare...yavudo hallialli hutti alli kelasa sigadhe bekshe bedalu illige bandu, namma bikshe thindu ishtu kabbidirella innu namage esthu kabbira beda... illina bikshe mugísi mudhine jagakke hogi..

Anonymous said...

Rajanikant B::

Bangalore is one of the greatest city in India with education , software, business etc.
So i am telling to anybody either stay or leave the city. But remember you can not forget the city until life is there.
So enjoy the life in Bangalore whatever it may be ie traffic etc.
So namma bangalore nam naadu....
So I LOVE BANGALORE.

Parisarapremi said...

ಬರೀ "ಲೀವಿಂಗ್" ಅಂದ್ರೆ ಸಾಲದು, ತೊಲಗಬೇಕು.

ಆ ಬೋರ್ಡು ಸ್ವಲ್ಪ ಸಿಹಿ ಸುದ್ದಿಯಾದರೂ ಹೇಳುತ್ತಿದೆ. ತೊಲಗಲಿ. ಕಾರಣಗಳನ್ನು ಕೊಟ್ಟುಕೊಂಡು ಇಲ್ಲೇ ನೆಲೆಯೂರಿರೋ ದುರಹಂಕಾರಿಗಳೆಲ್ಲಾ ತೊಲಗಲಿ. ನೆಮ್ಮದಿ ದೊರಕೀತು ಬೆಂಗಳೂರಿಗರಿಗೆ.

Unknown said...

ಬೆಂಗಳೂರಿಗೆ ಕೆಲಸಕ್ಕಾಗಿ ಬಂದು ಇಲ್ಲಿನ ಸೌಕರ್ಯಗಳನ್ನೆಲ್ಲಾ ಅನುಭವಿಸಿ, ಎನ್ಜಾಯ್ ಮಾಡಿ, ಇಲ್ಲಿನ ಅನ್ನವನ್ನು ತಿಂದು ಇಲ್ಲಿನ ಜನರನ್ನೇ ಬೈದುಕೊಂಡು ಇರುವ ಜನಗಳನ್ನು ಒದ್ದೋಡಿದುವ ಕಾಲ ಬಂದಿದೆ. ಇಂಥ ಜನಗಳನ್ನು ನಾವೇನು ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ಇಂಥ ಸುಂದರವಾದ ಬೆಂಗಳೂರಿನಲ್ಲಿ ವಾಸಿಸಲು ಪುಣ್ಯ ಮಾಡಿರಬೇಕು.
ಸತ್ಯಪ್ರಕಾಶ್

Anonymous said...

As a stern and tough answer we kannadigas and non kannadigas who have respect for bangalore, shall create a website as "LEAVE BENGALURU" and ask all those idiots to leave our state totlly.Finally we will have our original bengaluru without trace of any nonsense people and their useless comments....Poornima

Anonymous said...

leavebangalore.com is a very smart way to make money. By placing such hoardings the website creators have made sure that ppl log into their website. They have put advertisements at the top of the page where there's no content. They are just playing and toying with emotions of people who like and dislike the current status of bangalore. And i think they have succeeded in it. Its good that such a website is seeing such negative response. People behind such websites should think twice before playing catch with human emotions. I think all of us who will post opinions on that site will be making fun of ourselves rather than sharing opinion - Chetan Kumar

Anonymous said...

Mr.Dinesh Kumar,
You have done a great work. Even i was wondering when i saw that board recently near Railway station.I got an edited photo of the same hording which i made , in reply to that dirty web hording its interesting. How can i send it to this blog mail me at mysoremahesh.art@gamail.com
-Mahesh.MB

Anonymous said...

ನಮ್ಮ ನೀರು, ನಮ್ಮ ಗಾಳಿ, ನಮ್ಮ ಭೂಮಿಯನ್ನು ಬಳಸಿ ಇಂಥ ಕೃತಘ್ನ ಮಾತಡುವ ಜನ ಭಾರತೀಯರೇ ಎನ್ನುವುದೇ ನನಗೆ ಅನುಮಾನವನ್ನುಂಟುಮಾಡುತ್ತಿದೆ. ನಾವು ಭಾರತೀಯರು ಎನ್ನುವ ಕಲ್ಪನೆ ಮೂಡುವುದು ಯಾವಾಗ?

Anonymous said...

ಈ ವೆಬ್ ಸೈಟಿನಲ್ಲಿ ಈಗ ಎನೂ ಇಲ್ಲ. ಹೆದರ್ಕೊಂಡು ಎಲ್ಲಾ ತೆಗೆದಿದ್ದಾರೆ ಅನ್ಸತ್ತೆ.

ಇದಾನು ರಿಜಿಸ್ಟರ್ ಮಾಡಿದವರ ಮಾಹಿತಿ ಇಲ್ಲಿ ಲಭ್ಯವಿದೆ. ಇದನ್ನು ಸಂಬಂದಪಟ್ಟವರಿಗೆ ತೋರಿಸಿ
http://who.is/whois-com/ip-address/leavingbangalore.com/

Gajendra said...

hi dinesh,
elli poornima avaru heLidande yaakey ondu website create maadi...yellarigu tolagi anta heLbaaradu.......

bengalurina baggey tappu maatadidrey....bolimakkaligey edey....

I think its high time that bengaluru gets a raj thackery of its own....

Anonymous said...

leave bangalore anno abhiyaana shuru maadi, avaranella kalisi tata maadthiro dodh dodh poster ooralella haaksidhre avarigella heg annisbohudhu.

May be they will have to love it or leave it.

Anonymous said...

Who.is info for the site revealed that Spenta multimedia has set it up.
URL:
http://www.spentamultimedia.com/about/index.htm

Anonymous said...

Hmmm eega website khali idae...

Am writing this in english to make our beloved friends come from outside of Karnataka and dont like to stay here in bangalore or Karnataka and think its a not good place to stay in ..

First and foremost why the hell did u guys come here ?? Did we invite you? This state offered you job, a place to stay, food and every other basic ammunities and you dare insult us ??!!!

You educated illitrates say we dont talk your language ?? Why the hell should we ? Why do you expect us to learn your language when we have our own, its your need to stay here hence your responsibility to learn and communicate... Have you seen any of us going to Delhi,Bombay,Calcutta or Tamilnadu and talking Kannada ?? We try to commute in English or Tamil or atleast we give a try... Most of you jack asses staying in Karnataka from a long time have you ever tried to learn kannada ? But we generous hearted kannadigas try to speak your language right from a autodriver to a multinational company employee what else you expect from us ? Araee how did u guys descide that Hindi should be a universal language in every part of this country ?? Wake up u fools, hope you are aware of this saying "Be a Roman when you are in Rome" Respect the place and its people and you will gain respect in return.

You talk about pathetic infrastructure ?? You northi asslickers you people descided Mumbai,Delhi,Calcutta and Chennai as Mertos in the 80's and 90's and provided every necessary fundings to grow from central, Bangalore was never a metro till it became a IT Hub, we are self made people, we constructed this city brick by brick. How dare you talk about our city like this ?? What have you done for the development of this place ? Buddy tell which place in the world is perfect ?

This city has provided job to thousands of you northis and others so you watch your words before talking ill about my place else you will have to eat ur words..

Show me any other place in this country which is so comfortable to stay in every season, you idiots die in winter if you are in Delhi, drown in rainy season if you are in mumbai and burn to ashes in summer if you are from chennai,hyderabad,delhi.....
Karnataka is a heaven to stay in.

Some one spoke because of you northis karnataka is saved else we should have been begging ??!! Boss today this country's top performing belongs to a kannadiga (Infosys) you guys came in search of job here doesnot mean that we dont have talent here...most of the TCS employees are kannadigas so are in Infosys.

What we dont have is

Killer Blue line buses,rude and heartless cops, rapists like in Delhi.
Prostitution hub like in Mumbai or Calcutta, pethetic politics like in Tamilnadu...

Yes we sleep by 10pm hence we have less crime rates compared to any city in this country. If you think that this is not a place to live then you better Fuck the hell out of here. Else shut your mouth and gob and mind your business.

We respect one who respects us if you dont then you get the hell out of here we don't need you guys.

Prashanth

Unknown said...

Those who hates bangalore, please please leave the city and beg in any other place out side KARNATAKA with your wife and children....

Shesh

Amit S said...

Hi. I must say Blore is one of the best places I have been. Be it crowded or bad roads etc etc. It is the place to be. It gives so many opportunities and indeed makes u realize ur dream. Before coming to Blore I had heard ppl complaining it to be bad, pathetic city. But I really enjoy staying here. :)
BTW I did not understand Kannada. Still enjoyed reading.

Anonymous said...

ee bolimakkalige naavu ondu dodda poster haaki bengalooru bittu tolagi anta print haakisbeku.

ee goobe galu bengaloorna bittu tolagidre namge aaraam.

2000 isvi vargu bengalooru swarga idda haage ittu. ee soole maklu bandaaginda bengalooranna nodi nange bejaar aagta ide.

namgaldu tappide, ivarella bandaaga avara bhaashe le maataadi, jaaga kooda maadkottu tapp maadidvi.

innaadru nammavaru artha maadkondu, naavellaaru ellelli kelasa maadteevo allella kannada davaranne refer maadbeku.

ee kachada galige buddi kalis beku.

ivarella nam kaal nekkoke bandiro naayigalu,

How to download these films said...

Hi ,

Guys who are all want to go out of this city plzzzzzzzzzz get lost.I feel like kicking ur asses .....Ille iddu illede tindu nam cityge baitare bevarsi galu ..

Gowda said...

ಈ ಕರ್ಮಕಾಂಡದ ಹಿಂದಿರುವುದು ಯಾರೆಂಬುದನ್ನು ತಿಳಿಯುವ ಇಷ್ಟವಿದ್ದರೆ ಕೆಳಗೆ click ಮಾಡಿ
http://private.dnsstuff.com/tools/whois.ch?domain=leavingbangalore.com&email=on


ಈ ವೆಬ್ಸೈಟ್ register ಆಗಿರುವುದು ಈ ವಿಳಾಸ ಮತ್ತು ಹೆಸರಲ್ಲಿ:

Spenta Multimedia
Viraf (viraf.spenta@gmail.com)
Penninsuma Spenta
mathuradas Mill Compound
Lower Parel - Dr N.M Joshi Marg
Mumbai
Maharashtra,400013
IN
Tel. +022.24811814

Mythili said...

Thanks Dinesh,

For taking up and writing on this topic, many people donot even think of this things. every kannadiga should read this .