

ಇವುಗಳನ್ನು ಪೀಡೆಗಳೆನ್ನದೆ ಬೇರೆ ದಾರಿಯಿಲ್ಲ. ಇವು ಬೆಂಗಳೂರಿಗೆ ಅಂಟಿಕೊಂಡ ವಾಸಿಯಾಗದ ಖಾಯಿಲೆಗಳು. ದೇಶಭಕ್ತರ ವರಸೆಯಲ್ಲಿ ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೇಲಿ ಮಾಡುವ ಇವುಗಳ ಮೈಮನಸ್ಸು ತುಂಬಾ ವಿಕೃತಿಯೇ. ಬದುಕಿನ ಅನಿವಾರ್ಯತೆಗಾಗಿ ಬೆಂಗಳೂರಿಗೆ ಬಂದು ಕುಳಿತ ಈ ವಲಸಿಗರ ದುರಹಂಕಾರ ಮಿತಿಮೀರುತ್ತಿರುವ ಹಾಗಿದೆ.
ಒಂದು ಪೀಡೆ ಹೀಗೆನ್ನುತ್ತದೆ: Pathetic Infrastructure .. Most stupid road and footpath design .. Goon autowallas, highest fuel prices, highest road tax, almost zero business and service sense, No proper town planning, Farthest Airport .. and guys!! u know you will not find all these in any of the major Indian cities like Hyderabad, Chennai, Kochi, Noida, Gurgaon, Chandigarh, Jaipur, Ahemdabad, Delhi, Lucknow, Mumbai and Pune !!”
ಮತ್ತೊಂದು ಪೀಡೆ ಹೀಗೆನ್ನುತ್ತದೆ:“Yes ! I tool WILL LEAVE Bangalore ! I’ve been here for almost an year and Except my Job I cannot recall single thing in this city that I can relate myself too. As for some practical reasons, friends above have already posted dozens valid points (so avoiding duplicity). Just Adding my 1 thought: Bangalore, for you to become a true cosmopolitan city, first you need to open yourself to India and Indians. If you will continue paint your Busses, Route-maps, Area Layout maps in “Kannada” how will everyone understand and accept you ?”
ಇನ್ನೊಂದು ಪೀಡೆ ಹೀಗೆನ್ನುತ್ತದೆ: Yes...me also leaving soon. This the most over hyped city in India. The city with worst infrastructure should not be the IT hub of India. People are very rude and egoistic here. And auto driver behaves like a “Millionaire” here and we really need to beg them to board an auto. I am staying in so called posh area and we suffer power cut at least 2-3 hrs a day. Walking on the road at 9 pm is like a 2 am in Mumbai. I have read that some good for nothing kannadiga people said that outsider made bangalore worst. But they does not know that if outsider start leaving bangalore then kannadiga people has come one streets with their families begging for alms and this IT hub become “BAGGER HUB” of India. I am sure that sooner or later this IT hub should be shifted to a better place and it will.”
ಮಗದೊಂದು ಪೀಡೆ ಹೀಗೆನ್ನುತ್ತದೆ: “I want to leave Bangalore as soon as possible. Need the reasons;here they are - 1. There is so much hype about the city; people living in other cities consider it a heaven... but you know the reality when you live here. Bangalore sets false expectations...let the world know its reality. 2.The roads are pathetic...too bad to be called roads. 3.Public transport, so called auto and buses they govern the city. Running without meter and talking nonsense... 4.Kannada language,which people love to speak thinking as if it is India’s national language. 5.The city sleeps at 10 and the dogs wake... The reasons are uncountable; conclusion is just one; Bangalore is not a place to live in...”
ಇಂಥ ದುರಹಂಕಾರಿ, ದಾರ್ಷ್ಟ್ಯದ ಬರೆಹಗಳೆಲ್ಲಾ ದಾಖಲಾಗಿರುವುದು http://www.leavingbangalore.com/ ಎಂಬ ವೆಬ್‌ಸೈಟ್‌ನಲ್ಲಿ. ಈ ವೈಬ್‌ಸೈಟ್‌ಗೆ ಸದ್ಯಕ್ಕೆ ಅಪ್ಪ ಅಮ್ಮ ಯಾರೂ ಇಲ್ಲ.
ನಿನ್ನೆ ಮೆಜೆಸ್ಟಿಕ್ ಬಳಿ ಬರುತ್ತಿದ್ದಾಗ ದೊಡ್ಡ ಗಾತ್ರದ ವಿನೈಲ್ ಫಲಕವೊಂದನ್ನು ನೋಡಿದೆ. ಅದರಲ್ಲಿ ಒಬ್ಬ ಹೆಂಗಸು ತನ್ನ ಗಂಟುಮೂಟೆ ಕಟ್ಟಿಕೊಂಡು ಹೋಗುತ್ತಿರುವ ಚಿತ್ರವೊಂದನ್ನು ಮುದ್ರಿಸಲಾಗಿದೆ. ಕೆಳಗೆ ಈ ವೆಬ್‌ಸೈಟ್‌ನ ವಿಳಾಸ. ಈ ಫಲಕ ನೋಡಿದ ಕೂಡಲೇ ಬೆಂಗಳೂರನ್ನು ತಮ್ಮ ವೇಶ್ಯಾಗೃಹ ಮಾಡಿಕೊಳ್ಳಲು ಯತ್ನಿಸುತ್ತಿರುವ ಕೆಲ ಕಾರ್ಪರೇಟ್ ಸಂಸ್ಥೆಗಳ ಕುಮ್ಮಕ್ಕೇ ಕಣ್ಣಿಗೆ ರಾಚಿತು.
ಈ ವೆಬ್‌ಸೈಟ್‌ನ ಜಾಹೀರಾತು ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದೆಯಂತೆ. ಕುತೂಹಲದಿಂದ ಈ ವೆಬ್‌ಸೈಟ್ ತೆರೆದುನೋಡಿದೆ. ‘ಯಾಕೆ ನೀವು ಬೆಂಗಳೂರು ತೊರೆಯಲು ನಿರ್ಧರಿಸಿದ್ದೀರಿ? ಇಲ್ಲಿನ ರಸ್ತೆಗಳಿಂದಲೇ? ಇಲ್ಲಿನ ಟ್ರಾಫಿಕ್ ಸಮಸ್ಯೆಯಿಂದಲೇ? ಇಲ್ಲಿನ ಜನರಿಂದಲೇ? ಏನಾಗುತ್ತಿದೆ ಇಲ್ಲಿ? ಎಂಬ ಪ್ರಶ್ನೆಗಳನ್ನು ಇಟ್ಟು ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ನೂರಾರು ಜನರ ಪ್ರತಿಕ್ರಿಯೆಯ ಹೊರತಾಗಿ ಇಲ್ಲಿ ಮಿಕ್ಕ ಏನೂ ಇಲ್ಲ. ಇದನ್ನು ಸೃಷ್ಟಿಸಿದ ಮುಖೇಡಿಯ ಹೆಸರು, ವಿಳಾಸವೂ ಇಲ್ಲ.
ಈ ಸೈಟ್ ಯಾಕೆ ಹುಟ್ಟಿಕೊಂಡಿದೆ, ಇದನ್ನು ಸೃಷ್ಟಿಸಿದವರ್‍ಯಾರು ಎಂಬುದರ ಬಗ್ಗೆ ಹೆಚ್ಚು ಚರ್ಚಿಸಬೇಕಾಗಿಲ್ಲವೆನಿಸುತ್ತದೆ. ಒಂದು ವೇಳೆ ಬೆಂಗಳೂರಿಗೆ ವಲಸೆ ಬಂದಿರುವವರು ಇಲ್ಲಿಂದ ಹೊರಟು ಹೋದರೆ ಕನ್ನಡಿಗರು ತಮ್ಮ ಹೆಂಡಿರು ಮಕ್ಕಳೊಂದಿಗೆ ಭಿಕ್ಷೆ ಬೇಡಬೇಕಾಗುತ್ತದೆ ಎಂಬ ಮಾತಿನಿಂದ ಹಿಡಿದು ಇಲ್ಲಿನ ಬಿಎಂಟಿಸಿ, ಆಟೋ ರಿಕ್ಷಾ ಡ್ರೈವರ್‌ಗಳನ್ನು ಗೂಂಡಾಗಳು ಎನ್ನುವವರೆಗೆ ಇಲ್ಲಿ ಬಗೆಬಗೆಯ ಅಭಿಪ್ರಾಯಗಳು ಹರಡಿಕೊಂಡಿವೆ. . ಕನ್ನಡಿಗರು ಕನ್ನಡವನ್ನೇ ರಾಷ್ಟ್ರೀಯ ಭಾಷೆ ಎಂದು ಭಾವಿಸಿದ್ದಾರೆ ಎಂದು ಮೂರ್ಖನೊಬ್ಬ ಪ್ರತಿಕ್ರಿಯಿಸಿದ್ದಾನೆ. ಬಹುಶಃ ಈ ಸೈಟ್ ಸೃಷ್ಟಿಸಿದವನ ಉದ್ದೇಶವೂ ಇದೇ ಆಗಿತ್ತು ಎಂದು ಊಹಿಸಬಹುದು. ಕನ್ನಡಿಗರನ್ನು ತೆಗಳುವುದು, ಅಪಮಾನಿಸುವುದೇ ಈ ವೆಬ್‌ಸೈಟ್‌ನ ಮೂಲೋದ್ದೇಶ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಹೀಗೆ ಅಂತರ್ಜಾಲದಲ್ಲಿ ಕನ್ನಡಿಗರನ್ನು, ಕರ್ನಾಟಕವನ್ನು ಇಲ್ಲಿ ಬಂದು ಬದುಕುತ್ತಿರುವವರೇ ತೆಗಳುವ, ಗೇಲಿ ಮಾಡುವ ಕಾಯಕ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ತಮ್ಮ ಊರು-ಕೇರಿ ಬಿಟ್ಟು ಬದುಕು ಸಾಗಿಸಲು ಬೆಂಗಳೂರಿಗೆ ಬಂದು ಬಿದ್ದವರು ಕನಿಷ್ಠ ಇಲ್ಲಿನ ನೆಲ-ಸಂಸ್ಕೃತಿ-ಭಾಷೆಯ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಇಲ್ಲಿನ ಜನ ಬಯಸುವುದು ಸಹಜ. ಆದರೆ ಈ ದುರಹಂಕಾರಿಗಳು ಕನ್ನಡಿಗರನ್ನು ನಿಂದಿಸುವ ಕಾಯಕವನ್ನು ಜಾರಿಯಲ್ಲೇ ಇಟ್ಟುಕೊಂಡಿದ್ದಾರೆ.
ಈ ರೀತಿಯ ಕನ್ನಡ ವಿರೋಧಿ ಚಟುವಟಿಕೆಗಳು ಒಂದಲ್ಲ ಒಂದು ಬಗೆಯಲ್ಲಿ ನಡೆಯುತ್ತಲೇ ಇದೆ. ಕೆಲವು ಹೊರಜಗತ್ತಿಗೆ ಗೊತ್ತಾಗುತ್ತದೆ, ಮತ್ತೆ ಕೆಲವು ಒಳಗಿಂದೊಳಗೇ ನಡೆಯುತ್ತವೆ.
ಈಗ ಈ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ ಮಾಫಿಯಾ ಗುಂಪು ರಾಜಾರೋಷವಾಗಿ ಬೀದಿಪ್ರಚಾರಕ್ಕೆ ಇಳಿದ ಹಾಗೆ ಕಾಣುತ್ತದೆ. ಇಲ್ಲವಾದಲ್ಲಿ ಬೆಂಗಳೂರಿನ ಹೃದಯದಲ್ಲೇ ಇಂಥ ಜಾಹೀರಾತು ಪ್ರಕಟಿಸುವ ಧೈರ್ಯವನ್ನು ಇವರು ಮಾಡುತ್ತಿರಲಿಲ್ಲ.
ಒಂದು ವೇಳೆ ಈ ಮುಖೇಡಿಗಳಿಗೆ ಬೆಂಗಳೂರಿನಲ್ಲಿ ವಾಸ ಮಾಡುವುದು ಕಷ್ಟವೆನಿಸಿದರೆ ಅವರನ್ನು ಇಲ್ಲೇ ಇರಿ ಎಂದು ಮುದ್ದು ಮಾಡಿದವರು ಯಾರು. ಇವರನ್ನು ಕರೆದುಕೊಂಡು ಬಂದವರಾದರೂ ಯಾರು? ಬೆಂಗಳೂರಿನ ಹವಾಮಾನ, ಇಲ್ಲಿನ ಜನರ ಹೃದಯವೈಶಾಲ್ಯ, ಉದ್ಯೋಗದ ಅವಕಾಶಗಳಿಂದಲ್ಲವೇ ಈ ಪೀಡೆಗಳು ಬಂದು ಇಲ್ಲಿಗೆ ಒಕ್ಕರಿಸಿದ್ದು? ಇಲ್ಲಿ ವ್ಯವಸ್ಥೆ ಸರಿಯಿಲ್ಲವೆಂದರೆ ಅವರು ಇಲ್ಲಿ ಇರುವ ಅವಶ್ಯಕತೆಯೂ ಇಲ್ಲ.
ಬೆಂಗಳೂರು ಈ ಪೀಡೆಗಳು ಬರುವ ಮುನ್ನವೇ ಹೆಚ್ಚು ಸುಖ ಸಮೃದ್ಧಿಯಾಗಿತ್ತು. ಈ ಜನರು ಬಂದ ಮೇಲೆಯೇ ಇಲ್ಲಿ ಬಡವರ, ಮಧ್ಯಮವರ್ಗದವರ ಬದುಕು ದುಸ್ತರವಾಗಿದ್ದು, ಬೆಲೆಗಳು ಗಗನಕ್ಕೇರಿದ್ದು, ಕೊಳ್ಳುಬಾಕ ಸಂಸ್ಕೃತಿಗೆ ಸಮಾಜ ದಿಕ್ಕುಗೆಟ್ಟಿದ್ದು. ಈ ಪೀಡೆಗಳಿಂದಲೇ ಬೆಂಗಳೂರಿನಲ್ಲಿ ಸೈಟುಗಳ ಬೆಲೆ ಗಗನಕ್ಕೇರಿದ್ದು, ಮನೆಬಾಡಿಗೆ ಕೈಗೆ ಎಟುಕದಂತಾಗಿದ್ದು.
ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೋದರೆ ಭಿಕ್ಷುಕರಾಗುವವರು ನಾವು ಕನ್ನಡಿಗರಲ್ಲ, ಈ ಮುಖೇಡಿಗಳೇ! ಬೆಂಗಳೂರು ನೆಮ್ಮದಿಯಾಗಿ ಉಸಿರಾಡುತ್ತದೆ.
ಒಂದು ವೇಳೆ ಇವರು ಬೆಂಗಳೂರು ಬಿಟ್ಟು ಹೊರಡುವ ಮನಸ್ಸು ಮಾಡಿದ್ದರೆ ಯಾಕಿನ್ನೂ ಯಾರೂ ಹೋಗುತ್ತಿಲ್ಲ? ಸುಮ್ಮನೆ ಹೊರಟು ಹೋಗುವ ಬದಲು ನಾವು ಬೆಂಗಳೂರು ಬಿಟ್ಟುಹೋಗುತ್ತಿದ್ದೇವೆ ಎಂದು ಯಾರನ್ನೋ ಬೆದರಿಸುವ ತಂತ್ರವೇಕೆ? ಹಾಗೆ ಬೆದರುವವರಾದರೂ ಯಾರು? ಇಂಥ ಕೊಳಕು ಬುದ್ಧಿಯವರು ಇಲ್ಲಿಂದ ತೊಲಗಲು ಲಾಯಕ್ಕಾದವರೇ ಸರಿ. ಹೀಗಾಗಿ ಈ ಬಗೆಯ ವೆಬ್ ಸೈಟ್ ಮಾಡಿಕೊಂಡು ಕರ್ನಾಟಕ, ಬೆಂಗಳೂರಿನ ವಿರುದ್ಧ ಅಪಪ್ರಚಾರ, ಗೇಲಿ ಮಾಡುವವರು ಆದಷ್ಟು ಬೇಗ ತೊಲಗಿಹೋಗಲಿ.
ಇದೇ ವೆಬ್‌ಸೈಟ್‌ನಲ್ಲಿ ಹಲವರು ಈ ದುರಹಂಕಾರಿಗಳ ಸೊಕ್ಕನ್ನು ಅಡಗಿಸುವ ಮಾತನ್ನೂ ದಾಖಲಿಸಿದ್ದಾರೆ. ಅದರಲ್ಲಿ ಒಂದು ಬರೆಹ ಹೀಗಿದೆ: Hello ppl.. I love Bangalore for what it is.. I am not a Kannadiga and I'm in Bangalore for 4 years now and i do have many reasons to say that I love this city. Bangalore is the place where many ppl realize their dreams.. First job, first salary, frenz at office.. and the list goes on... What if u have traffic? What if the city is expensive? Please stop complaining about the city. It's really a cool place to stay. However the city now is, it's because of us who stay here. People come here from all over India to earn a livelihood & after getting everything from this place, they say the city is sick. For those ppl I would rather say "it's U & Ur thots that are sick and not the city". Tell me one good city in India, for that matter in the world, that doesn't have any problems.. Finally i have a message for all those who want to leave Bangalore for what so ever reason they have... Please leave and make it a better place for ppl like us who love this place..
ಚಿತ್ರಗಳು: ಶರಣ್