Wednesday, March 11, 2009

ಸಮಾನತೆಯ ಬೆಳಕಿಗಾಗಿ ಹಂಬಲಿಸುತ್ತ...

ಮಠಾಧೀಶರು ಸಮಾಜದ ಶತ್ರುಗಳೇ? ಎಂಬ ನನ್ನ ಲೇಖನಕ್ಕೆ ಅಮೆರಿಕದ ರವಿಕೃಷ್ಣಾರೆಡ್ಡಿಯವರು ಪ್ರತಿಕ್ರಿಯಿಸಿ ಶಿಕ್ಷಣದ ರಾಷ್ಟ್ರೀಕರಣ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಲು ಸಾಧ್ಯವೇ, ನೋಡಿ ಎಂದು ಸೂಚಿಸಿದ್ದರು. ಈ ಬಗ್ಗೆ ಗೆಳೆಯರ ಜತೆ ಮಾತನಾಡಿದೆ. ಅವರೂ ಆಸಕ್ತಿ ತೋರಿಸಿದರು.

ಏ.೫ರಂದು `ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಎಂಬ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ವಿಚಾರಸಂಕಿರಣ ಆಯೋಜಿಸಿದ್ದೇವೆ. ಇದು ಇಡೀ ಒಂದು ದಿನದ ಕಾರ್ಯಕ್ರಮ. ಶಿಕ್ಷಣ ತಜ್ಞರು, ಗಣ್ಯರು, ಸಾಹಿತಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.



ಕಾರ್ಯಕ್ರಮವನ್ನು ಸಂಯೋಜಿಸುತ್ತಿರುವುದು `ಸಂವಹನ ಸಂಘಟನೆ. ಬಹುತೇಕ ಮೀಡಿಯಾ ಮಿತ್ರರೇ ತಮ್ಮೊಳಗಿನ ಸಂವಹನಕ್ಕಾಗಿ ಆರಂಭಿಸಿದ ಸಂಘಟನೆ ಇದು. ಸಂಘಟನೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಇತ್ಯಾದಿ ಸಾಂಪ್ರದಾಯಿಕ ಹುದ್ದೆಗಳು ಇರುವುದಿಲ್ಲ. ಇದರಲ್ಲಿ ತೊಡಗಿಸಿಕೊಂಡವರ ಐಡೆಂಟಿಟಿಗಳೂ ಅನಗತ್ಯ ಎಂದೇ ಭಾವಿಸಿದ್ದೇವೆ.

ಸಂವಹನದ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳು ಸಂವಹನ ಬ್ಲಾಗ್‌ನಲ್ಲಿ ಲಭ್ಯ. ನಾವು ಎತ್ತಿಕೊಂಡಿರುವ ವಿಷಯದ ಕುರಿತೂ ಇಲ್ಲಿ ಚರ್ಚೆ ನಡೆಯುತ್ತದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು. `ಸಂವಹನದಲ್ಲಿ ತೊಡಗಿಕೊಳ್ಳಬಯಸುವವರಿಗೂ ಸ್ವಾಗತ. ಸಮಾನತೆ ಹಾಗು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬಹುದು. ಇದಕ್ಕಾಗಿ samvahanablr@gmail.com ಸಂಪರ್ಕಿಸಬಹುದು.

4 comments:

Anonymous said...

ಹೊಸ ಪ್ರಯತ್ನಕ್ಕೆ ಶುಭವಾಗಲಿ.
-ರಂಜಿತ್, ಕುಮಾರ್, ಸೌಮ್ಯ

Anonymous said...

ಶಿಕ್ಷಣದ ಸಮಸ್ಯೆಗಳ ಕುರಿತು, ಅದರಲ್ಲೂ ನೀವು ಎತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ಅತ್ಯಗತ್ಯ.
ವಿಚಾರಸಂಕಿರಣ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಮಲ್ನಾಡ್ ಮಹಬೂಬ್ ಪಾಷಾ

Anonymous said...

ನಿಮ್ಮ ಕೆಲಸ ಅತ್ಯಂತ ಅಪ್ತತೆಯಿಂದ ಕೂಡಿದೆ. ಇದು ಚರ್ಚೆಯಾಗಲೇ ಬೇಕಾದ ವಿಚಾರ. ಶಿಕ್ಷಣ ಕ್ಷೇತ್ರದ ಖಾಸಗೀಕರಣವಾಗುತ್ತಿರುವಂತೆ ಅದರ ಮೇಲೆ ಮಠಗಳ ಹಿಡಿತ ಹೆಚ್ಚುತ್ತಿದೆ ಎಂಬುದೇ ಬಹುತೇಕರ ಅನಿಸಿಕೆ.

Anonymous said...

ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಸಂವಹನ ತಂಡಕ್ಕೆ ಶುಭಾಷಯಗಳು. ನೀವು ನಡೆಸುತ್ತಿರುವ ಈ ಚರ್ಚೆ ನಾಡಿನ ಎಲ್ಲೆಡೆ ನಡೆಯಲೆಂದು ಆಶಿಸುತ್ತೇನೆ.